ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಆಡಿಯೋ ವಿಡಿಯೋ ಫೋರೆನ್ಸಿಕ್ಸ್ ವಿಭಾಗ

ತನಿಖೆಗೆ ಸಹಾಯ ಮಾಡಬಲ್ಲ ಧ್ವನಿಮುದ್ರಿತ ಆಡಿಯೋ ಮತ್ತು ವೀಡಿಯೋ ಮೂಲಗಳು ವ್ಯಾಪಕವಾಗಿ ಹೆಚ್ಚಿವೆ. ಆಡಿಯೋ ಹಾಗೂ ವೀಡಿಯೋ ಮುದ್ರಣಗಳು ಪ್ರತ್ಯಕ್ಷ ಸಾಕ್ಷಿಯಾಗಿ ತನಿಖಾಧಿಕಾರಿಗಳಿಗೆ ಅಪರಾಧ ನಡೆದ ದೃಶ್ಯಾವಳಿಗಳನ್ನು ತನಿಖೆಯ ಸಮಯದಲ್ಲಿ ನೋಡಲು ಹಾಗೂ ಕೇಳಲು ಸಹಕರಿಸುತ್ತದೆ. ಆಡಿಯೋ ಹಾಗೂ ವೀಡಿಯೋ ಮುದ್ರಣ ಸಾಕ್ಷ್ಯಗಳು ಹಿಂದೆಂದಿಗಿಂತಲೂ ಹೆಚ್ಚು ಸ್ಥಳಗಳಲ್ಲಿ ಮತ್ತು ಹೆಚ್ಚು ಮೂಲಗಳಿಂದ ಕಂಡುಬರುತ್ತಿವೆ. ಸಿಸಿಟಿವಿ ವ್ಯವಸ್ಥೆಗಳು ಮತ್ತು ಮೊಬೈಲ್ ಫೋನುಗಳ ಹೆಚ್ಚಿನ ಬಳಕೆಯು, ವೀಡಿಯೋ ಸಾಕ್ಷ್ಯದ ಪ್ರಮುಖ ಮೂಲಗಳಾಗಿ ಕಾರ‍್ಯನಿರ‍್ವಹಿಸುತ್ತಾ ಪ್ರತಿಯೊಂದು ಪಟ್ಟಣದ, ಪ್ರತಿಯೊಂದು ಮೂಲೆಗೂ ವೀಕ್ಷಣಾ ಸ್ಥರವನ್ನು ವಿಸ್ತರಿಸುತ್ತಿದೆ. ಫೋನ್ ಕರೆಗಳು, ಧ್ವನಿಮೇಲ್ ರೆಕರ‍್ಡಿಂಗ್ಗಳು, ವೀಡಿಯೋ ಕ್ಯಾಮೆರಾಗಳು, ಮೊಬೈಲ್ ಫೋನ್‌ಗಳು, ಸ್ಪೈ ಕ್ಯಾಮೆರಾಗಳು ಮತ್ತು ಕಂಪ್ಯೂಟರ್ ಫೈಲ್‌ಗಳು ಆಡಿಯೋ ಪುರಾವೆಗಳ ಮುಖ್ಯ ಮೂಲಗಳಾಗಿವೆ. ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಲ್ಲಿ ಲಭ್ಯವಿರುವ ಆಡಿಯೋ-ವೀಡಿಯೋ ಫೈಲ್‌ಗಳನ್ನು ಡಿಜಿಟಲ್ ಫೊರೆನ್ಸಿಕ್ಸ್ ತತ್ವಗಳನ್ನು ಬಳಸಿಕೊಂಡು ದತ್ತಾಂಶಗಳನ್ನು ಸಂಗ್ರಹಿಸಲಾಗುತ್ತದೆ. ಇದಲ್ಲದೆ, ವಿವಿಧ ಉದ್ದೇಶಗಳಿಗಾಗಿ ಫೋರೆನ್ಸಿಕ್ಸ್ ಉಪಕರಣಗಳು ಮತ್ತು ತಂತ್ರಾಂಶಗಳನ್ನು ಬಳಸಿ ಆಡಿಯೊ ವೀಡಿಯೋ ಫೈಲ್‌ಗಳನ್ನು ವಿಶ್ಲೇಷಿಸಲಾಗುತ್ತದೆ. ವೀಡಿಯೊ ಫೈಲ್‌ಗಳನ್ನು, ವಿಭಿನ್ನ ಫಿಲ್ರ‍್ಗಳನ್ನು ಬಳಸಿ ವಿಶ್ಲೇಷಿಸಲಾಗುತ್ತದೆ. ಸಂಸ್ಕರಿಸಿದ ವೀಡಿಯೋ ಫೈಲ್‌ಗಳಲ್ಲಿ ವ್ಯಕ್ತಿಗಳ ಮುಖ ಚಹರೆಯನ್ನು ಗುರುತಿಸುವಿಕೆಯಂತಹ ವಿಶ್ಲೇಷಣೆಯನ್ನು ನಡೆಸಲಾಗುತ್ತದೆ. ಆಡಿಯೋ ಫೈಲ್‌ಗಳಲ್ಲಿ, ಆಡಿಯೋ ಫೈಲ್‌ಗಳ ನೈಜತೆಯನ್ನು, ಆಡಿಯೋ ಸಂಭಾಷಣೆಯಲ್ಲಿರುವ ವ್ಯಕ್ತಿಗಳ ಧ್ವನಿ ಗುರುತಿಸುವಿಕೆ/ ಹೋಲಿಕೆಯನ್ನು ನಿರ‍್ವಹಿಸಲಾಗುತ್ತದೆ. ಆಡಿಯೋ-ವೀಡಿಯೋ ಪ್ರಕರಣಗಳಿಗೆ ಸಂಬಂಧಿಸಿದಂತೆ, ತನಿಖಾಧಿಕಾರಿ/ತನಿಖಾ ಸಂಸ್ಥೆಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಲ್ಲಿ ಸದರಿ ವಿಭಾಗವು ಮಹತ್ತರವಾದ ಪಾತ್ರವನ್ನು ಈ ಹಿಂದಿನಿಂದಲೂ ವಹಿಸುತ್ತಾ ಬಂದಿರುತ್ತದೆ.

×
ABOUT DULT ORGANISATIONAL STRUCTURE PROJECTS