ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಜೀವಶಾಸ್ತ್ರ ವಿಭಾಗ

ವಿಧಿ ವಿಜ್ಞಾನ ಜೀವಶಾಸ್ತ್ರ ವಿಭಾಗದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ದೊರೆಯುವ ಭೌತಿಕ ಹಾಗು ಜೈವಿಕ ಕುರುಹಗಳನ್ನು ಜೀವರಾಸಾಯನಿಕ ತಂತ್ರಗಳನ್ನು ಉಪಯೋಗಿಸಿ ವಿಶ್ಲೇಷಣೆ ಮಾಡಲಾಗುತ್ತದೆ. ಕಾನೂನು ಸುವ್ಯವಸ್ಥೆಯಲ್ಲಿ ಘಟಿಸುವ ಅಪರಾಧ ಪ್ರಕರಣಗಳಿಗೆ ವೈಜ್ಞಾನಿಕ ಸಾಕ್ಷ್ಯಧಾರಗಳನ್ನು ಒದಗಿಸುವಲ್ಲಿ ಈ ವಿಭಾಗವು ಪ್ರಮುಖ ಪಾತ್ರ ವಹಿಸುತ್ತದೆ. ಮುಖ್ಯ ವಾಗಿ ಜೀವಶಾಸ್ತ್ರ ವಿಭಾಗದಲ್ಲಿ ವಿವಿಧ ಪ್ರಕರಣಗಳು ಉದಾಹರಣೆಗೆ ಕೊಲೆ ಪ್ರಕರಣ, ಕೊಲೆ ಪ್ರಯತ್ನ, ಅತ್ಯಾಚಾರ, ದರೋಡೆ, ಕಳವು, ವರದಕ್ಷಿಣೆ ಕಿರುಕುಳ, ಅಸ್ವಾಭಾವಿಕ ಸಾವು, ಪ್ರಕೃತಿ ವಿಕೋಪಗಳು, ವನ್ಯಜೀವಿ ರಕ್ಷಣೆ ಕಾಯ್ದೆ, ಅಪಘಾತ, ನೀರಿನಲ್ಲಿ ಮುಳುಗಿದ ಸಾವಿನ ಪ್ರಕರಣ ಇತ್ಯಾದಿ. ಈ ಪ್ರಕರಣಗಳಲ್ಲಿ ಜೈವಿಕ ಕಲೆಗಳಾದ ರಕ್ತ, ರಕ್ತದ ಕಲೆಗಳು, ಜೊಲ್ಲಿನ ಅಂಶ, ವೀರ‍್ಯದ ಅಂಶ, ಯೋನಿ ದ್ರವದ ಅಂಶ ಹಾಗು ಕೂದಲು, ಮೂಳೆ, ಹಲ್ಲು, ಮಾಂಸ ಖಂಡಗಳನ್ನು ವಿಶ್ಲೇಷಣೆ ಮಾಡಿ ಅಪರಾಧ ಸಂಭವಿಸಿದ ಬಗ್ಗೆ ಅಪರಾಧಿ, ಅಪರಾಧ ಸ್ಥಳ ಮತ್ತು ನೊಂದ ವ್ಯಕ್ತಿಗೆ ಸಂಬಂಧ ಕಲ್ಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

            ಈ ವಿಭಾಗದಲ್ಲಿ ಸ್ವೀಕೃತವಾಗುವ ವಸ್ತುಗಳ ವಿವರ :

-- ಕೃತ್ಯ ನಡೆದ ಸ್ಥಳದಲ್ಲಿ ದೊರೆಯುವ ರಕ್ತ, ರಕ್ತದ ಕಲೆ, ಬಟ್ಟೆ, ಶಸ್ತ್ರಗಳು ಅಥವಾ ರಕ್ತದ ಕಲೆಯಿರುವ ಯಾವುದಾದರೂ ವಸ್ತು ಹಾಗು ವೈದ್ಯಾಧಿಕಾರಿಗಳು/ ತನಿಖಾಧಿಕಾರಿಗಳು ಸಂಗ್ರಹಿಸಿರುವ ಕುರುಹುಗಳು.

-- ಅತ್ಯಾಚಾರ ಪ್ರಕರಣಗಳು - ಬಟ್ಟೆ, ಚಾದರ, ಆರೋಪಿ ಬಟ್ಟೆ ಹಾಗು ವೈದ್ಯಾಧಿಕಾರಿಗಳು / ತನಿಖಾಧಿಕಾರಿಗಳು ಸಂಗ್ರಹಿಸಿರುವ ಕುರುಹುಗಳು.

--ಕೂದಲಿನ ಹೋಲಿಕೆ.

--ಶ್ವಾಸಕೋಶ, ಮೂಳೆ ಮಜ್ಜೆ, ಸ್ರ‍್ನಮ್ ಮೂಳೆ, ನೀರಿನ ಮಾದರಿಯನ್ನು ಡಯಾಟಮ್ ಪರೀಕ್ಷೆ ಮಾಡಲಾಗುತ್ತದೆ.

 

×
ABOUT DULT ORGANISATIONAL STRUCTURE PROJECTS