ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ರಸಾಯನಶಾಸ್ತ್ರ ವಿಭಾಗ

ರಸಾಯನಶಾಸ್ತ್ರ ವಿಭಾಗವು ಅಪರಾಧದ ಸ್ಥಳದಿಂದ ತರಲಾದ ಸಾಕ್ಷ್ಯದ ರಾಸಯನಿಕವನ್ನು ಗುರುತಿಸುತ್ತದೆ. ಈ ವಿಭಾಗವು IPC, Cr.P.C ಅಡಿಯಲ್ಲಿ ದಾಖಲಿಸಲಾದ ಭಾಂಗಿಗಳ/ ಪ್ರಕರಣಗಳು ಜೊತೆಗೆ ಸ್ಪೋಟಕ ಕಾಯಿದೆ, ಸ್ಪೋಟಕ ವಸ್ತುಗಳ ಕಾಯಿದೆ, ಕಲಬೆರಕೆ ಕಾಯಿದೆ, ಇ. ಸಿ. ಕಾಯಿದೆ, ವರದಕ್ಷಿಣೆ ನಿಷೇಧ ಕಾಯಿದೆ, ತಂಬಾಕು ಉತ್ಪನ್ನಗಳ (COPTA) ಕಾಯಿದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯಿದೆ, ವನ್ಯಜೀವಿ ಸಂರಕ್ಷಣಾ ಕಾಯಿದೆಯ ಪ್ರಕರಣಗಳನ್ನು ಪರೀಕ್ಷಿಸುತ್ತದೆ. ವಿಭಾಗವು ಮದ್ಯ, ಕಲಬೆರಕೆ ಮದ್ಯ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಅವುಗಳ ಅವಶೇಷಗಳು, ಸ್ಪೋಟಕ ವಸ್ತುಗಳು, ಪಟಾಕಿ ಸಂಯೋಜನೆಗಳು, ಆಮ್ಲಗಳು, ಕ್ಷಾರ, ತಂಬಾಕು, ಉದಾತ್ತ ಲೋಹಗಳು ಮುಂತಾದ ಮಾದರಿಗಳಲ್ಲಿ ವಿವಿಧ ರಾಸಾಯನಿಕ ಪರೀಕ್ಷೆ ಮತ್ತು ಗುರುತಿಸುವಿಕೆಯನ್ನು ಈ ವಿಭಾಗದಲ್ಲಿ ಕೈಗೊಳ್ಳಲಾಗುತ್ತದೆ. ವಸ್ತುವಿನ ಮಾದರಿ ಅವಲಂಬಿಸಿ ವೈಜ್ಞಾನಿಕ ತಂತ್ರಗಳು ಮತ್ತು ಉಪಕರಣಗಳು ಆಯ್ಕೆಯ ಪ್ರಕಾರವನ್ನು ನಿರ್ದರಿಸಲಾಗುತ್ತದೆ.

ಪ್ರಯೋಗಾಲಯದ ತಂತ್ರಗಳು ಮತ್ತು ಉಪಕರಣಗಳ ವ್ಯಾಪಕ ಶ್ರೇಣಿಯನ್ನು ವಿಧಿವಿಜ್ಞಾನ ಅಧ್ಯಯನಗಳಲ್ಲಿ ಬಳಸಲಾಗುತ್ತದೆ. ಪರೀಕ್ಷಿಸಿದ ಹೆಚ್ಚಿನ ಮಾದರಿಗಳು ಶುದ್ಧ ಪದಾರ್ಥಗಳಲ್ಲ, ಆದರೆ ಸಾಮಾನ್ಯವಾಗಿ ಕೊಳಕು ಅಥವಾ ಹಲವು ವಸ್ತುಗಳೊಂದಿಗೆ ಮಿಶ್ರಣವಾಗಿದ್ದು, ವಿಶ್ಲೇಷಕರಿಗೆ ಒಂದು ಪ್ರಮುಖ ಸವಾಲಾಗಿರುತ್ತದೆ. ಪ್ರಕರಣಗಳ ರಾಸಾಯನಿಕ ಗುಣಾತ್ಮಕ ಮತ್ತು ಪರಿಮಾಣಾತ್ಮಕ ವಿಶ್ಲೇಷಣೆಯು ರಾಸಾಯನಿಕ ಮತ್ತು ವೈಜ್ಞಾನಿಕ ಉಪಕರಣಗಳ ವಿಧಾನಗಳನ್ನು ಒಳಗೊಂಡಿದೆ. ವಿಭಾಗವು ವಿಶ್ಲೇಷಣೆಗೆ ಅಗತ್ಯವಿರುವ ಎಲ್ಲಾ ಅತ್ಯಗತ್ಯವಾದ ಉನ್ನತ ಸಾಧನ/ ಉಪಕರಣಗಳೊಂದಿಗೆ ಸುಸಜ್ಜಿತವಾದ ಪ್ರಯೋಗಾಲಯವಾಗಿದೆ. ವೈಜ್ಞಾನಿಕ ಅಧಿಕಾರಿಗಳು ಅಪರಾಧದ ಸ್ಥಳಗಳಿಗೆ ಭೇಟಿ ನೀಡಿ ವೈಜ್ಞಾನಿಕ ವಿಧಾನದಲ್ಲಿ ಸಾಕ್ಷಿಯ ಸಾಮಗ್ರಿಗಳನ್ನು ಸಂಗ್ರಹಿಸುತ್ತಿದ್ದು, ಇದು ತನಿಖಾ ಅಧಿಕಾರಿಗಳ ತನಿಖೆಗೆ ಸಹಾಯಕವಾಗುತ್ತಿದೆ.

×
ABOUT DULT ORGANISATIONAL STRUCTURE PROJECTS