ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಕಂಪ್ಯೂಟರ್ ಫೋರೆನ್ಸಿಕ್ಸ್ ವಿಭಾಗ

ಕಂಪ್ಯೂಟರ್ ಫೋರೆನ್ಸಿಕ್ಸ್ ವಿಭಾಗದಲ್ಲಿ ತನಿಖಾ ಮತ್ತು ವಿಶ್ಲೇಷಣಾ ತಂತ್ರಗಳನ್ನು ಅಳವಡಿಸಿ ವೈಜ್ಞಾನಿಕವಾಗಿ ಮಾಹಿತಿಯನ್ನು ಸಂಗ್ರಹಿಸಿ ಸೂಕ್ತವಾದ ರೀತಿಯಲ್ಲಿ ಪ್ರಸ್ತುತಿ ಪಡಿಸಲಾಗುವುದು.

ವಿಶ್ಲೇಷಣಾ ಅಧಿಕಾರಿಗಳು ಮೂಲ ಸಾಕ್ಷ್ಯವನ್ನು ಸಂರಕ್ಷಿಸುವ ಸಲುವಾಗಿ ಕಂಪ್ಯೂಟರ್/ಲ್ಯಾಪ್‌ಟಾಪ್/ಮೆಮೊರಿ ಸ್ಟೋರೇಜ್ ಸಾಧನಗಳಲ್ಲಿ ಇರುವ ಡಿಜಿಟಲ್ ದತ್ತಾಂಶವನ್ನು ಸಂಪೂರ್ಣವಾಗಿ ಮತ್ತೊಂದು ಸಾಧನದಲ್ಲಿ ನಕಲು ಮಾಡಲಾಗುತ್ತದೆ. ಇದರಿಂದ ಮೂಲ ಸಾಧನದ ದತ್ತಾಂಶದ ಅಳಿಸುವುಕೆ ಹಾಗೂ ಮಾರ್ಪಾಡನ್ನು ತಡೆಯಲಾಗುವುದು. ನಂತರ ನಕಲು ಮಾಡಲಾದ ಸಾಧನದ ದತ್ತಾಂಶವನ್ನು ಪರಿಶೀಲಿಸಿದ ನಂತರವೇ, ವಿಶ್ಲೇಷಕರು ಮಾಹಿತಿಯನ್ನು ಸಂಗ್ರಹಿಸಿ ಧೃಢಿಕರಿಸುತ್ತಾರೆ. 

ಕಂಪ್ಯೂಟರ್ ಫೊರೆನ್ಸಿಕ್ ವಿಭಾಗವು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಹಾನಿಗೊಳಗಾದ  ಸಾಧನದಿಂದ  ಮಾಹಿತಿಯನ್ನು ಸಂಗ್ರಹಿಸುವ ಸೌಲಭ್ಯವನ್ನು ಹೊಂದಿದೆ.

ಕಂಪ್ಯೂಟರ್ ಫೊರೆನ್ಸಿಕ್ ವಿಭಾಗವು ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಕಲಂ 79ಎ   ಅಡಿಯಲ್ಲಿ ಎಕ್ಸಾಮಿನರ್ ಆಫ್ ಎಲೆಕ್ಟಾನಿಕ್ಸ್ ಎವಿಡೆನ್ಸ್ ನ ಮಾನ್ಯತೆಯನ್ನು ಹೊಂದಿದೆ.  

 

×
ABOUT DULT ORGANISATIONAL STRUCTURE PROJECTS