ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಡಿ.ಎನ್.ಎ ವಿಭಾಗ

ಡೀಆಕ್ಸಿ ರೈಬೋನ್ಯೂಕ್ಲಿಕ್ ಆಸಿಡ್ (ಡಿ.ಎನ್.ಎ) ಪ್ರೋಫೈಲಿಂಗ್ ತಂತ್ರಜ್ಞಾನವು ಅಪರಾಧ ತನಿಖೆಯಲ್ಲಿನ ಅತ್ಯಂತ ಉಪಯುಕ್ತ ಹಾಗೂ ಅತ್ಯಗತ್ಯ ಸಾಧನವೆಂದು ಪರಿಗಣಿಸಲಾಗಿದೆ. ಈ ತಂತ್ರಜ್ಞಾನವು, ಪ್ರಪಂಚದಲ್ಲಿರುವ ಎಲ್ಲ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ನ್ಯಾಯವಿಜ್ಞಾನ ಪ್ರಯೋಗಾಲಯಗಳಲ್ಲಿ ಸಾರ್ವತ್ರಿಕ ಸ್ವೀಕೃತಿಯನ್ನು ಗಳಿಸಿದ್ದು, ನ್ಯಾಯ ವ್ಯವಸ್ಥೆಯ ಒಂದು ಅವಿಭಾಜ್ಯ ಅಂಗವಾಗಿದೆ. ರಾಜ್ಯ ನ್ಯಾಯವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಇಲ್ಲಿನ ಡಿ.ಎನ್.ಎ ವಿಭಾಗವು ೨೦೦೮ ನೇ ಸಾಲಿನಲ್ಲ್ಲಿ ಪ್ರಾರಂಭವಾಗಿದ್ದು, ಅಂದಿನಿಂದ ಹಲವಾರು ಪೋಕ್ಸೊ ಪ್ರಕರಣಗಳು, ಪಿತೃತ್ವ ವಿವಾದಗಳು, ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಕೊಲೆ ಮುಂತಾದಂತಹ ಗಂಭೀರ ಹಾಗೂ ಅತೀ ಗಂಭೀರ ಪ್ರಕರಣಗಳಲ್ಲಿನ ಆರೋಪಿಗಳ ಗುರುತಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಇವುಗಳಲ್ಲದೆ, ನೈಸರ್ಗಿಕ ದುರಂತಗಳು, ಸಾಮೂಹಿಕ ದುರಂತಗಳು, ಹಾಗು ಅಗ್ನಿ ಅವಗಢ ಪ್ರಕರಣಗಳ ತನಿಖೆಯಲ್ಲಿಯೂ ಕೂಡಾ ಅಪಾರ ಕೊಡುಗೆಗಳನ್ನು ನೀಡಿದೆ. ಡಿ.ಎನ್.ಎ ವಿಭಾಗದಲ್ಲಿ, ರಕ್ತ, ವೀರ್ಯ, ಭ್ರೂಣ, ಭ್ರೂಣದ ಅಂಶ, ಜೊಲ್ಲುರಸ, ಮೂಳೆ, ಹಲ್ಲು, ಕೂದಲು, ಉಗುರು ಇತ್ಯಾದಿಗಳಂತಹ ಜೈವಿಕ ಮಾದರಿಗಳ ಡಿ.ಎನ್.ಎ ಪ್ರೋಫೈಲಿಂಗ್ ಪರೀಕ್ಷೆಗಳನ್ನು ಕೈಗೊಳ್ಳುತ್ತದೆ.

ಕಳೆದ ದಶಕದಲ್ಲಿ ಡಿ.ಎನ್.ಎ ವಿಭಾಗವು ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಲು, ಹೊಸ ಉಪಕರಣಗಳು ಹಾಗೂ ತಂತ್ರಜ್ಞಾನಗಳನ್ನು ಬೆಳೆಸಿಕೊಂಡು ಬಂದಿದೆ.

ಡಿ.ಎನ್.ಎ ವಿಭಾಗದಲ್ಲಿನ ಅಧಿಕಾರಿಗಳ, ಡಿ.ಎನ್.ಎ ಪ್ರೋಫೈಲಿಂಗ್ ತಂತ್ರಜ್ಞಾನದ ಪರಿಣಿತಿ ಆಧಾರದ ಮೇಲೆ, ಜ್ಞಾನಭಾರತಿ ಸಾಮೂಹಿಕ ಅತ್ಯಾಚಾರ ಪ್ರಕರಣ, ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ, ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ಇತ್ಯಾದಿ ಸೂಕ್ಷ್ಮ, ಅತೀಸೂಕ್ಷ್ಮ ಪ್ರಕರಣಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಲ್ಲದೇ, ನ್ಯಾಯಾಲಯದ ಹೊಗಳಿಕೆಗೆ ಪಾತ್ರವಾಗಿದೆ.

ಇತ್ತೀಚಿನ ದಿನಗಳಲ್ಲಿ, ಡಿ.ಎನ್.ಎ ವಿಭಾಗದಲ್ಲಿ ಪ್ರಕರಣಗಳ ನೊಂದಣಿ ಸಂಖ್ಯೆಯು, ೨೦೦೮ ನೇ ಸಾಲಿಗೆ ಹೋಲಿಸಿದರೆ, ಹತ್ತರಷ್ಟು ಹೆಚ್ಚಿದ್ದು, ಮುಂಬರುವ ದಿನಗಳಲ್ಲಿ ಹೊಸ ಕ್ರಾಂತಿಯ ಜೊತೆಗೆ ಹೊಸ ಸವಾಲುಗಳನ್ನು ತಂದೊಡ್ಡಲಿದೆ. ಈ ನಿಟ್ಟಿನಲ್ಲಿ, ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು, ಡಿ.ಎನ್.ಎ ವಿಭಾಗವು ಡಿ.ಎನ್.ಎ ಪ್ರೋಫೈಲಿಂಗ್ ತಂತ್ರಜ್ಞಾನದ ಹೊಸ ಆಯಾಮಗಳನ್ನು ಅನ್ವೇಷಿಸಲು ಸಿದ್ಧವಾಗಿದೆ.

 

 

×
ABOUT DULT ORGANISATIONAL STRUCTURE PROJECTS