ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಅಗ್ನಿ ಅಸ್ತ್ರ ವಿಭಾಗ

 

ಅಗ್ನಿ ಅಸ್ತ್ರ ವಿಭಾಗ  ಪ್ರಾಥಮಿಕವಾಗಿ ಬಂದೂಕುಗಳು ಮತ್ತು ಮದ್ದುಗುಂಡುಗಳ ಬಳಕೆಯನ್ನು ಒಳಗೊಂಡಿರುವ ಪ್ರಕರಣಗಳ ಅಗತ್ಯತೆಯನ್ನು ಪೂರೈಸುತ್ತದೆ.

ಅಗ್ನಿ ಅಸ್ತ್ರ ವಿಭಾಗದಲ್ಲಿ ಈ ಕೆಳಗಿನ ವೈಜ್ಞಾನಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ:-

ಬಂದೂಕುಗಳ ಮತ್ತು ಮದ್ದುಗುಂಡುಗಳ ಸಾಮರ್ಥ್ಯ ಹಾಗೂ ಚಾಲನಾ ಸ್ಥಿತಿಯ ಪರೀಕ್ಷೆ ಮಾಡಲಾಗುವುದು. ಫೈರ್ ಆಗಿರುವ ಮತ್ತು ಫೈರ್ ಆಗದಿರುವ ಮದ್ದುಗುಂಡುಗಳ ಪ್ರಕಾರ ಮತ್ತು ಕ್ಯಾಲಿಬರನ್ನು ನಿರ್ಧರಿಸಲಾಗುವುದು. ಆರೋಪಿಸಲಾದ/ಶಂಕಿಸಲಾದ ಬಂದೂಕು, ಮದ್ದುಗುಂಡು ಮತ್ತು ಅದರ ಬಿಡಿ ಭಾಗಗಳು ನಿಷೇದಿತವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವುದು ಹಾಗೂ ಅವುಗಳು ಅಸಲಿ ಅಥವಾ ನಕಲಿ ಎಂಬುದನ್ನು ದೃಡಪಡಿಸುವುದು. ಫೈರ್ ಆಗಿರುವ ಮದ್ದುಗುಂಡುಗಳು ಆರೋಪಿಸಲಾದ/ಶಂಕಿತ ಬಂದೂಕಿನಿಂದ ಫೈರ್ ಆಗಿದೆಯೇ ಇಲ್ಲವೇ ಎಂಬುದನ್ನು ಪತ್ತೆಹಚ್ಚುವುದು. ಬಟ್ಟೆಗಳು ಮತ್ತು ಇತರ ಸಾಮಾಗ್ರಿಗಳ ಪರೀಕ್ಷೆ. ಗುಂಡು ಹಾರಿರುವ ಅಂತರ, ಕೋನ, ದಿಕ್ಕು ಮತ್ತು ಗುಂಡು ಹಾರಿದ ದೂರದ ಪರಿಮಿತಿ ನಿರ್ಣಯಿಸುವುದು. ಶಂಕಿತ ಬಂದೂಕುಗಳು ಭಾರತೀಯ ಶಶ್ತ್ರಾಸ್ತ್ರ ಕಾಯಿದೆ, ೧೯೫೯/ ಆಯುಧ ನಿಯಮಗಳು ೨೦೧೬ ರ ನಿಬಂಧನೆಯ ಅಡಿಯಲ್ಲಿ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.

 

×
ABOUT DULT ORGANISATIONAL STRUCTURE PROJECTS