ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಮೊಬೈಲ್‌ ಫೊರೆನ್ಸಿಕ್‌ ವಿಭಾಗ

 

ಆಧುನಿಕ ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯ ನೆರಳಿ ನಂತಿರುವ ವಸ್ತುವೆಂದರೆ ಅದು ಆ ವ್ಯಕ್ತಿಯ ಮೊಬೈಲ್‌ ಪೋನ್.‌ ಆ ವ್ಯಕ್ತಿಯ ಕುರಿತಾದ ಮಾಹಿತಿ ಮೊಬೈಲ್‌ಪೋನ್ ಸಾಧನದಲ್ಲಿರುತ್ತದೆ. ಇಂತಹ ಸಾಧನದಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಹಾಗು ಸಾರ್ವಜನಿಕ ಜೀವನದ ಬಹು ಮುಖ್ಯ ವಿಚಾರಗಳನ್ನು ತಿಳಿಯಬಹುದಾಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮೊಬೈಲ್‌ ಪೋನ್‌ ವ್ಯಕ್ತಿಯೊಬ್ಬನ ಸಂಪೂರ್ಣ ಮಾಹಿತಿ ಕಣಜವೇ ಆಗಿದೆ.  ಮೊಬೈಲ್ ಪೋನ್‌ಗಳಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಪೋನ್‌ನಲ್ಲಿರುವ ದತ್ತಾಂಶ ,ಸೇವಾ ಚಂದಾದರ ದತ್ತಾಂಶ, ಕ್ಲೌಡ್ ದತ್ತಾಂಶ ಎಂಬ ವಿಧಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಬಹುದಾಗಿದೆ. ಮೊಬೈಲ್‌ ಪೊರೆನ್ಸಿಕ್‌ವಿಭಾಗವು ಮೊಬೈಲ್ ಪೋನ್ ನಲ್ಲಿರುವ ದತ್ತಾಂಶಗಳಗೊಂಡಂತೆ ಸಿಮ್‌ಕಾರ್ಡ್‌, ಮೆಮೊರಿ ಕಾರ್ಡ್‌ ಹಾಗೂ ಇನ್ನಿತರ ಸಾಧನಗಳಲ್ಲಿರುವ ತನಿಖಾ ಮಾಹಿತಿಯನ್ನು ಸಂಗ್ರಹಿಸಿ ಮತ್ತು ವಿಶ್ಲೇಷಿಸುವ ಕಾರ್ಯದಲ್ಲಿ ನಿರತವಾಗಿದೆ. ಅಳಿಸಲಾದ ದತ್ತಾಂಶಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಸಂಗ್ರಹಿಸಿ ಕೊಡಲಾಗುವುದು.

ಮೊಬೈಲ್ ಫೊರೆನ್ಸಿಕ್ ವಿಭಾಗದಲ್ಲಿ   ಭೌತಿಕವಾಗಿ ಹಾನಿಯಾಗಿರುವ ಮೊಬೈಲ್ ಪೋನ್  ಗಳಿಂದ  ದತ್ತಾಂಶಗಳನ್ನು  ಸಂಗ್ರಹಿಸಲಾಗುವುದು.

ಮೊಬೈಲ್ ಫೊರೆನ್ಸಿಕ್ ವಿಭಾಗವು ಮಾಹಿತಿ ತಂತ್ರಜ್ಞಾನ ಕಾಯಿದೆ 2000, ಕಾಲಂ 79ಎ ಅಡಿಯಲ್ಲಿ ಎಕ್ಸಾಮಿನರ್ ಆಫ್ ಎಲೆಕ್ಟಾನಿಕ್ಸ್ ಎವಿಡೆನ್ಸ್ ನ ಮಾನ್ಯತೆಯನ್ನು ಹೊಂದಿದೆ.  

 

 

×
ABOUT DULT ORGANISATIONAL STRUCTURE PROJECTS