ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ನಾರ್ಕೋಟಿಕ್ಸ್ ವಿಭಾಗ

ದೇಶದ ಕೆಲವೇ ಕೆಲವು ನ್ಯಾಯ ವಿಜ್ಞಾನ ಪ್ರಯೋಗಾಲಯಗಳು ಅತ್ಯುನ್ನತ ನಾರ್ಕೋಟಿಕ್ಸ್ ವಿಭಾಗಗಳನ್ನು ಹೊಂದಿದ್ದು ಅವುಗಳಲ್ಲಿ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರು ಸಹ ಅಂತಹಾ ಒಂದು ಸಂಸ್ಥೆಯಾಗಿದ್ದು ಮಾದಕ ವಸ್ತುಗಳ ವಿಶ್ಲೇಷಣೆಗೆಂದೇ ಪ್ರತ್ಯೇಕವಾದ, ವಿಶೇಷವಾದ ಪೂರ್ಣ ಪ್ರಮಾಣದ ವಿಭಾಗವನ್ನು ನವೆಂಬರ್ ೨೦೨೦ ರಿಂದ ಪ್ರಾರಂಬಿಸಲಾಯಿತು. ಈ ವಿಭಾಗದಲ್ಲಿ ನಾರ್ಕೋಟಿಕ್ಸ್ ಡ್ರಗ್ಸ್ ಹಾಗೂ ಸೈಕೋಟ್ರೋಪಿಕ್ ಸಬ್ಸಾಟನ್ಸ್ ಆಕ್ಟ್ ೧೯೮೫ ಅಡಿಯಲ್ಲಿ ಬರುವಂತಹ ಕೇಸುಗಳಾದ ಗಾಂಜಾ, ಚರಸ್, ಅಫೀಮು, ಹೆರಾಯಿನ್, ಕೊಕೈನ್, ಆಂಫಿಟಮೈನ್ ನಂತಹ ಉತ್ತೇಜಕಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಒಂದು ಕಾಸ್ಮೋಪಾಲಿಟನ್ ನಗರವಾಗಿ ಬೆಳೆಯುತ್ತಿರುವುದರಿಂದ ಸಿಂಥೆಟಿಕ್ ಮಾದಕವಸ್ತುಗಳಾದ ಎಲ್.ಎಸ್.ಡಿ., ಮೆಫೆಡ್ರೋನ್, ಖಾತ್ ಲೀವ್ಸ್ ಮತ್ತು ಸಿಂಥೆಟಿಕ್ ಕ್ಯಾತಿನೋನ್ಸ್ ತರಹದ ಮಾದಕವಸ್ತುಗಳನ್ನು ತನಿಖಾದಿಕಾರಿಗಳು ವಶಪಡಿಸಿಕೊಂಡು ವಿಶ್ಲೇಷಣೆಗಾಗಿ ರವಾನಿಸುತ್ತಿದ್ದಾರೆ.

ಈ ವಿಭಾಗದಲ್ಲಿ ಅತ್ಯುನ್ನತ ದರ್ಜೆಯ ಉಪಕರಣಗಳನ್ನು ಉಪಯೋಗಿಸಿಕೊಂಡು ಎಲ್ಲಾ ರೀತಿಯ ಮಾದಕವಸ್ತುಗಳನ್ನು ವಿಶ್ಲೇಷಣೆಮಾಡಲಾಗುತ್ತಿದೆ.

 

 

×
ABOUT DULT ORGANISATIONAL STRUCTURE PROJECTS