ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಭೌತಶಾಸ್ತ್ರ ವಿಭಾಗ

ನ್ಯಾಯ ವಿಜ್ಞಾನ ಪ್ರಯೋಗಾಲಯ ಭೌತಶಾಸ್ತ್ರ ವಿಭಾಗದಲ್ಲಿ ಭೌತಿಕ ಗುಣ ಲಕ್ಷಣಗಳಾದ ಸಾಂದ್ರತೆ, ವಕ್ರೀಕಾರಕ ಸೂಚ್ಯಂಕ, ಪ್ರತಿರೋಧಕತೆ, ಸಂಯೋಜನೆ ಮತ್ತು ರೋಹಿತದ ಗುಣಲಕ್ಷಣಗಳ ಆಧಾರದ ಮೇಲೆ ವಿವಿಧ ಭೌತಿಕ ಸಾಕ್ಷ್ಯಗಳ ಪರೀಕ್ಷೆ ಮತ್ತು ಹೋಲಿಕೆಯನ್ನು ನಿರ‍್ವಹಿಸಲಾಗುವುದು.

ಭೌತಶಾಸ್ತ್ರ ವಿಭಾಗವು ಭೌತಿಕ ಕುರುಹುಗಳ ಹೋಲಿಕೆ, ಗುರುತಿಸುವಿಕೆ ಮತ್ತು ಮೂಲ ನಿರ‍್ಣಯಕ್ಕಾಗಿ ಪುರಾವೆಗಳ ಪರೀಕ್ಷೆಯನ್ನು ನಡೆಸಲಾಗುತ್ತದೆ. ಭೌತಿಕ ಕುರುಹುಗಳಾದ ಆಯುಧ ಮತ್ತು ಆಯುಧದ ಗುರುತುಗಳು, ಲೋಹಗಳ ಮೇಲೆ ತಯಾರಕರ ಗುರುತಿನ ಗುರುತುಗಳು, ಪಾದರಕ್ಷೆಗಳು ಮತ್ತು ಟೈರ್ ಗುರುತುಗಳು, ಕಡಿಮೆ ಪ್ರಮಾಣದ ಮಣ್ಣು / ಧೂಳು / ಗಾರೆ / ಕಾಂಕ್ರೀಟ್ / ಕಲ್ಲುಗಳು, ಗಾಜಿನ ತುಣುಕುಗಳು , ಬಣ್ಣದ ತುಣುಕುಗಳು, ನೂಲು ಹಾಗೂ ಬಟ್ಟೆಗಳು, ಹಗ್ಗ ಮತ್ತು ದಾರ ಇವುಗಳ ಮಾದರಿಯೊದಿಂಗೆ ಹೋಲಿಕೆ ಮಾಡಲಾಗುವುದು. ಬೂದಿ, ಸುಡದ ಮತ್ತು ಅರೆ ಸುಟ್ಟ ವಸ್ತುಗಳಲ್ಲಿ ಬಟ್ಟೆಯ ಅಂಶ ಪತ್ತೆಹಚ್ಚಲಾಗುವುದು. ಗೃಹೋಪಯೋಗಿ ವಸ್ತುಗಳ ಚಾಲನಾ ಸ್ಥಿತಿ ಬಗ್ಗೆ ಪರೀಕ್ಷಿಸಲಾಗುವುದು, ವ್ಯಾಪಾರ ಮತ್ತು ಸರಕುಗಳ ಕಾಯಿದೆ ಅಡಿಯಲ್ಲಿ ಅನುಕರಿಸಿದ ನಕಲು ವಸ್ತುಗಳನ್ನು ಕಂಪೆನಿಯ ಮೂಲ ವಸ್ತುಗಳೊಂದಿಗೆ ಭೌತಿಕ ಹೋಲಿಕೆ ಮಾಡಲಾಗುವುದು. ವಾಹನಗಳ ಮೇಲಿರುವ ಇಂಜಿನ್ ಮತ್ತು ಚಾಸಿಸ್ ಸಂಖ್ಯೆಗಳನ್ನು ಅಳಿಸಿದ ಪಕ್ಷದಲ್ಲಿ ವಾಹನದ ಮೂಲ ಇಂಜಿನ್ ಮತ್ತು ಚಾಸಿಸ್ ಸಂಖ್ಯೆಗಳನ್ನು ಪತ್ತೆ ಹಚ್ಚಲಾಗುವುದು.

 

 

 

×
ABOUT DULT ORGANISATIONAL STRUCTURE PROJECTS