ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ವಿಷವಿಜ್ಞಾನ ವಿಭಾಗ

ವಿಷವಿಜ್ಞಾನವು ಮಾರಣಾಂತಿಕ ಪರಿಣಾಮ, ಮಾರಕ ಪ್ರಮಾಣ ವಿಷಗಳ ವಿಶ್ಲೇಷಣೆ ಮತ್ತು ಪರಿಹಾರ ಕ್ರಮಗಳನ್ನು ಒಳಗೊಂಡಿರುವ ವಿಜ್ಞಾನ. ವಿಷಶಾಸ್ತ್ರದಲ್ಲಿ ನಾಲ್ಕು ಮುಖ್ಯ ವಿಭಾಗಗಳು, ನ್ಯಾಯ, ಕೈಗಾರಿಕಾ, ಕ್ಲಿನಿಕಲ್ ಮತ್ತು ಪರಿಸರ. ಜೀವಿಗಳ ಮೇಲೆ ವಿಷಕಾರಿ ಪದಾರ್ಥಗಳಿಗೆ ಫೋರೆನ್ಸಿಕ್ ವಿಷ ಶಾಸ್ತ್ರಜ್ಞರು ಪ್ರಾಥಮಿಕವಾಗಿ ಮಾನವ ಮತ್ತು ಪ್ರಾಣಿಗಳ ಮೇಲೆ ರಸಾಯನಿಕಗಳ ಹಾನಿಕಾರಕ ಪರಿಣಾಮಗಳ ವೈದ್ಯಕೀಯ ಕಾನೂನು ಅಂಶಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಫೋರೆನ್ಸಿಕ್ ವಿಷ ಶಾಸ್ತ್ರಜ್ಞರ ಪರಿಣತಿಯನ್ನು ಪ್ರಾಥಮಿಕವಾಗಿ ಸಾವಿನ ಕಾರಣವನ್ನು ಸ್ಥಾಪಿಸುವಲ್ಲಿ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ಅದರ ಸಂದರ್ಭಗಳನ್ನು ಸ್ಪಷ್ಟಪಡಿಸುವಲ್ಲಿ ಬಳಸಲಾಗಿದೆ.

ಆದ್ದರಿಂದ, ಫೋರೆನ್ಸಿಕ್ ವಿಷ ಶಾಸ್ತ್ರಜ್ಞರ ಕೆಲಸವನ್ನು ಕಡಿಮೆ ಪ್ರಮಾಣದ ವಿಷಗಳು ಹೆಚ್ಚು ಸಂಕೀರ್ಣವೆಂದು ಪರಿಗಣಿಸಲಾಗುತ್ತದೆ. ವಿಷಗಳ ಮೆಟಬೊಲೈಟ್ಸ್ ಗಳನ್ನು ಪ್ರತ್ಯೆಕಿಸಿ ಶುದ್ದೀಕರಿಸಲಾಗುತ್ತದೆ ಮತ್ತು ಹೆಚ್ಚು ಸಂಕೀರ್ಣವಾದ ಮೆಟ್ರೆಸಿಸ್‌ಗಳಿಂದ ಪ್ರಮಾಣೀಕರಿಸಲಾಗುತ್ತದೆ. ವಿಷವಿಜ್ಞಾನ ವಿಭಾಗಕ್ಕೆ ಉಲ್ಲೇಖಿಸಲಾದ ಪ್ರಕರಣಗಳು ಮುಖ್ಯವಾಗಿ ಮರಣೊತ್ತರ ಪರೀಕ್ಷೆಯ ಮಾದರಿಗಳಾಗಿವೆ. ಇದರಲ್ಲಿ ರಕ್ತ, ಮೂತ್ರ, ಜಠರ ತೊಳೆದ ದ್ರಾವಣ, ವಾಂತಿ, ದೇಹದ ಪ್ರಮುಖ ಒಳ ಅಂಗಾಂಗಗಳ ಭಾಗಗಳು ಅಥವಾ ಯಾವುದೇ ಇತರ ಭೌತಿಕ ವಸ್ತುಗಳನ್ನು (ಕೀಟನಾಶಕಗಳ ಡಬ್ಬಿಗಳು, ಬಟ್ಟೆಗಳು, ಮಾತ್ರೆಗಳು, ಇತ್ಯಾದಿ.) ಒಳಗೊಂಡಿರುತ್ತದೆ. ಜೀವಂತ ಪ್ರಕರಣಗಳಲ್ಲಿ, ಕುಡಿದು ವಾಹನ ಚಲಾಯಿಸುವ ಪ್ರಕರಣಗಳಲ್ಲಿ, ರಕ್ತ ಮೂತ್ರದ ಮಾದರಿ, ಜಠರ ತೊಳೆದ ದ್ರಾವಣ, ಕೂದಲು, ಉಗುರುಗಳನ್ನು ಸ್ವೀಕರಿಸಲಾಗುತ್ತದೆ.

ವಿಷವಿಜ್ಞಾನ ವಿಭಾಗದಲ್ಲಿ ಫೋರೆನ್ಸಿಕ್ ಮ್ಯಾಟ್ರಿಕ್ಸ್ಗಳಿಂದ ಬಾಷ್ಪ ಶೀಲವಲ್ಲದ, ಸಂಶ್ಲೇಶಿತ ಸಸ್ಯವಿಷಗಳು, ಕೀಟನಾಶಕಗಳು, ಲೋಹದ ಅಂಶಗಳು, ಆಲ್ಕಲಾಯ್ಡ್ ವಿಷಗಳು, ನಿದ್ರಾಜನಕ ಔಷಧಿಗಳು, ಅರವಳಿಕೆಗಳು, ರಸಾಯನಿಕಗಳು ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ.

 

×
ABOUT DULT ORGANISATIONAL STRUCTURE PROJECTS