ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಮನೋವಿಜ್ಞಾನ ವಿಭಾಗ

ನ್ಯಾಯ ಮನೋವಿಜ್ಞಾನ ವಿಭಾಗವು ಯಾವುದೇ ತರಹದ ಅಪರಾಧದೊಂದಿಗೆ ಸಂಪರ್ಕ ಹೊಂದಿದ ಜನರನ್ನು ಅಥವಾ ಅಪರಾಧದಲ್ಲಿ ಅವರ ಭಾಗವಹಿಸುವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಹೊರ ಹಾಕಲು ಕಾರ್ಯನಿರ್ವಹಿಸುತ್ತದೆ. ಶಂಕಿತರು, ಆರೋಪಿಗಳು, ಸಾಕ್ಷಿಗಳು ಮತ್ತು ಅಪರಾಧಕ್ಕೆ ಸಂಬಂಧಿಸಿದ ಸಂಚುಕೋರರನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ತೆಲಗಿಯ ಬಹುಕೋಟಿ ಛಾಪಾ ಕಾಗದ ಪ್ರಕರಣ, ಮುಂಬೈ ಸರಣಿ ರೈಲು ಸ್ಪೋಟ, ಆರುಷಿ ಹತ್ಯೆ ಪ್ರಕರಣ, ಸಹೋದರಿ ಅಭಯ ಪ್ರಕರಣ ಮುಂತಾದ ರಾಜ್ಯ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ಪ್ರಕರಣಗಳನ್ನು ಈ ವಿಭಾಗದಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ.

ಮರೆಮಾಚಿದ ಅಪರಾಧವನ್ನು ಪತ್ತೆ ಹಚ್ಚುವ ಸಾಧನಗಳಾದ ಸುಳ್ಳು ಪತ್ತೆ ಪರೀಕ್ಷೆ(ಪಾಲಿಗ್ರಾಫ್ ಪರೀಕ್ಷೆ),  ಬ್ರೈನ್ ಮ್ಯಾಪಿಂಗ್ ಮತ್ತು ಮಂಪರು ಪರೀಕ್ಷೆಗಳನ್ನು ವ್ಯಕ್ತಿಯ ಒಪ್ಪಿಗೆಯ ಪತ್ರ ಮತ್ತು ನ್ಯಾಯಾಲಯದ ಅನುಮತಿಯ ಪತ್ರದೊಂದಿಗೆ ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

 

×
ABOUT DULT ORGANISATIONAL STRUCTURE PROJECTS