ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಳಗಾವಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಉತ್ತರ ವಲಯ ಬೆಳಗಾವಿಯಲ್ಲಿ ದಿನಾಂಕ:೨೪/೦೫/೨೦೦೪ ರಂದು ಸರ್ಕಾರಿ ಆದೇಶ ಸಂಖ್ಯೆ: ಹೆಚ್ ೧೦ ಪಿಎಫ್‌ಎಸ್ ೯೬ ಬೆಂಗಳೂರು ಆದೇಶದ ಪ್ರಕಾರ ಒಟ್ಟು ೨೮ ಅಧಿಕಾರಿ/ ಸಿಬ್ಬಂದಿಯೊಂದಿಗೆ ಖಾಸಗಿ ಕಟ್ಟಡದಲ್ಲಿ ವಿದ್ಯುಕ್ತಕವಾಗಿ ಪ್ರಾರಂಭಿಸಲಾಯಿತು.

ಈ ಪ್ರಯೋಗಾಲಯದ ಹೊಸ ಕಟ್ಟಡವು ದಿನಾಂಕ: ೩೦/೦೧/೨೦೧೨ ರಂದು ಶ್ರೀಯುತ ಶಂಕರ ಬಿದರಿ (ಪೊಲೀಸ ಮಹಾನಿರ್ದೇಶಕರು) ರವರಿಂದ ಉದ್ಗಾಟಿಸಲಾಯಿತು.

ಈ ಪ್ರಯೋಗಾಲಯದಲ್ಲಿ ಜೀವಶಾಸ್ತ್ರ , ವಿಭಾಗ, ವಿಷವಿಜ್ಞಾನ ವಿಭಾಗ, ರಸಾಯನಿಕ ವಿಭಾಗ, ಪ್ರಶ್ನಾತಿತ ದಸ್ತಾನು ವಿಭಾಗ, ಮನೋಶಾಸ್ತ್ರ , ವಿಭಾಗ ಹಾಗೂ ಛಾಯಾಚಿತ್ರ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ವಿಭಾಗಗಳಿಗೆ ಸಂಬಂದಪಟ್ಟ ವಿವಿದ ಪ್ರಕರಣಗಳನ್ನು ಸ್ವೀಕರಿಸಿ ವರದಿಗಳನ್ನು ನೀಡುತ್ತಿದ್ದು, ಜೊತೆಗೆ ಈ ಪ್ರಯೋಗಾಲಯದ ಅಧಿಕಾರಿಗಳು ವಿವಿಧ ಅಪರಾಧ ನಡೆದ ಘಟನಾ ಸ್ಥಳ ಪರಿಶಿಲನೆಗೆ ತೆರಳಿ ಸಾಕ್ಷಗಳನ್ನು ಹುಡುಕುವಲ್ಲಿ ಹಾಗೂ ಸಂಗ್ರಹಿಸುವಲ್ಲಿ ನಮ್ಮ ಅಧಿಕಾರಿಗಳು ತನಿಖಾಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದಾರೆ ಅಲ್ಲದೆ ವೈದ್ಯಾಧಿಕಾರಿಗಳಿಗೆ/ವೈದ್ಯಕೀಯ ವಿದ್ಯಾರ್ಥಿಗಳಿಗೆ, ಕಾನೂನುಅಧಿಕಾರಿಗಳಿಗೆ/ವಿದ್ಯಾರ್ಥಿಗಳಿಗೆ, ಸ್ನಾತಕೋತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ಹಾಗೂ ತನಿಖಾಧಿಕಾರಿಗಳಿಗೆ ತರಬೇತಿಯನ್ನು ನೀಡುತ್ತಿದ್ದೇವೆ.

 

×
ABOUT DULT ORGANISATIONAL STRUCTURE PROJECTS