ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ದಾವಣಗೆರೆ

ಈ ಪ್ರಯೋಗಾಲಯವು ಕರ್ನಾಟಕ ರಾಜ್ಯದಲ್ಲಿ ಪ್ರಾರಂಭವಾದ ಪ್ರಪ್ರಥಮ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವಾಗಿ ದಿನಾಂಕ ೧೭/೧೨/೧೯೯೪ ರಿಂದ ಸರ್ಕಾರಿ ಆದೇಶ ಸಂಖ್ಯೆ: ಹೆಚ್‌ಡಿ ೦೩ ಪಿಎಫ್‌ಎಸ್ ೧೯೯೩ ಬೆಂಗಳೂರು ದಿನಾಂಕ ೧೨/೦೧/೧೯೯೪ ರಂತೆ ದಾವಣಗೆರೆಯಲ್ಲಿನ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾಗಿ ನಂತರ ಬಾತಿ ಗುಡ್ಡ ಕ್ಯಾಂಪ್ ದೊಡ್ಡಬಾತಿ ದಾವಣಗೆರೆಯಲ್ಲಿ ನಿರ್ಮಿಸಲಾದ ಸ್ವಂತ ಕಟ್ಟಡಕ್ಕೆ  ಸ್ಥಳಾಂತರಿಸಲಾಗಿರುತ್ತದೆ.  ಈ ಪ್ರಯೋಗಾಲಯದ ನೆಲಮಹಡಿಯಲ್ಲಿ ಸ್ಥಳವಕಾಶದ ಕೊರತೆ ಇದ್ದ ಕಾರಣ ೨೦೧೩ನೇ ಸಾಲಿನಲ್ಲಿ ಮೊದಲನೇ ಮಹಡಿಯನ್ನು ನಿರ್ಮಿಸಲಾಗಿರುತ್ತದೆ. ಪ್ರಾರಂಭದಲ್ಲಿ ಈ ಪ್ರಯೋಗಾಲಯದಲ್ಲಿ ಜೀವಶಾಸ್ತ್ರ, ವಿಷವಿಜ್ಞಾನ ಮತ್ತು ಛಾಯಾಚಿತ್ರ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, ಪೂರ್ವ ವಲಯದ ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ ವರದಿಗಳನ್ನು ನೀಡಲಾಗುತ್ತಿದೆ.

ಸರ್ಕಾರ ಆದೇಶದ  ಅನ್ವಯ  ಪ್ರಾದೇಶಿಕ ನ್ಯಾಯ ವಿಜ್ಞಾನ ಘಟಕಗಳಲ್ಲಿ ಮನೋವಿಜ್ಞಾನ ವಿಭಾಗಗಳಿಗೆ ಮಂಜೂರಾತಿ ದೊರೆತಿರುತ್ತದೆ.  

ಸರ್ಕಾರಿ ಆದೇಶದಂತೆ ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ಪುನರ್‌ರಚನೆ ಮಾಡಿ ರಸಾಯನಶಾಸ್ತ್ರ ಮತ್ತು ಪ್ರಶ್ತಿತ ದಸ್ತಾವೇಜು ವಿಭಾಗಗಳಿಗೆ ಮಂಜೂರಾತಿ ದೊರೆತಿರುತ್ತದೆ. ಅದರಂತೆ, ಪ್ರಸ್ತುತ ಈ ಪ್ರಯೋಗಾಲಯದ ಜೀವಶಾಸ್ತ್ರ, ವಿಷವಿಜ್ಞಾನ, ಛಾಯಾಚಿತ್ರ, ರಸಾಯನಿಕ ಶಾಸ್ತ್ರ ಮತ್ತು ಪ್ರಶ್ನಿತ ದಸ್ತಾವೇಜು ವಿಭಾಗಗಳಲ್ಲಿ ಪೂರ್ವ ವಲಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸ್ವೀಕರಿಸಿ ವಿಶ್ಲೇಷಣೆ ನಡೆಸಿ ವರದಿಗಳನ್ನು ನೀಡಲಾಗುತ್ತಿದೆ. 

 

×
ABOUT DULT ORGANISATIONAL STRUCTURE PROJECTS