ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಕಲಬುರಗಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಕಲಬುರಗಿ ಘಟಕವು ಕರ್ನಾಟಕ ಸರ್ಕಾರದ ಆದೇಶ ಸಂ. ಹೆಚ್‌ಡಿ/೧೦/ಪಿಎಫ್‌ಎಸ್/೯೬, ಬೆಂಗಳೂರು, ದಿನಾಂಕ: ೧೨/೦೩/೨೦೦೧ ರ ಪ್ರಕಾರ ಪೊಲೀಸ್ ತರಬೇತಿ ಕಾಲೇಜು ಕ್ಯಾಂಪಸ್, ನಾಗನಹಳ್ಳಿ ಕಲಬುರಗಿಯಲ್ಲಿರುವ ತನ್ನ ಸ್ವಂತ ಕಟ್ಟಡದಲ್ಲಿ ಮೇ ೨೦೦೪ ರಿಂದ ಕಾರ್ಯಾರಾಂಭಗೊಂಡಿರುತ್ತದೆ.

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಕಲಬುರಗಿ ಘಟಕದಲ್ಲಿ ವಿಷವಿಜ್ಞಾನ ವಿಭಾಗ, ಜೀವಶಾಸ್ತ್ರ ವಿಭಾಗ, ಛಾಯಾಚಿತ್ರ ವಿಭಾಗ, ರಸಾಯನಶಾಸ್ತ್ರ ವಿಭಾಗ, ಪ್ರಶ್ನಿತ ದಸ್ತಾವೇಜು ವಿಭಾಗ ಮತ್ತು ಮನೋವಿಜ್ಞಾನ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ಸದ್ಯ ಕಲಬುರಗಿ ಘಟಕವು ಈಶಾನ್ಯ ವಲಯ ಮತ್ತು ಬಳ್ಳಾರಿ ವಲಯದ ಪ್ರಕರಣಗಳನ್ನು ಸ್ವೀಕರಿಸುತ್ತಿದೆ.

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಕಲಬುರಗಿಯು, NABL, GOI ನಿಂದ ಮಾನ್ಯತೆ ಪಡೆಯಲು ISO/IEC/17025/2017 ರ ಅವಶ್ಯಕತೆಗಳಿಗೆ ಅನುಗುಣವಾಗಿ ಗುಣಮಟ್ಟದ ವ್ಯವಸ್ಥೆಯನ್ನು ಸ್ಥಾಪಿಸಿದೆ. ನಿಯಮಿತ ಕೆಲಸಗಳ ಜೊತೆಗೆ ಈ ಪ್ರಯೋಗಾಲಯದ ವಿಜ್ಞಾನಿಗಳು ಅಪರಾಧ ಸ್ಥಳಕ್ಕೆ ಭೇಟಿ ನೀಡುವುದು; ಸಂಶೋಧನೆ; ಪೊಲೀಸ್ ಕರ್ತವ್ಯ ಕೂಟಗಳನ್ನು ನಡೆಸುವುದು; ಮತ್ತು ತನಿಖಾಧಿಕಾರಿಗಳಿಗೆ, ವೈಧ್ಯಾಧಿಕಾರಿಗಳಿಗೆ, ನ್ಯಾಯಾಂಗ ಅಧಿಕಾರಿಗಳಿಗೆ ಮತ್ತು ಇತರೆ ಬಳಕೆದಾರರ ಏಜೆನ್ಸಿಗಳಿಗೆ ಅಗತ್ಯ ಆಧಾರಿತ ತರಬೇತಿ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

 

 

 

 

×
ABOUT DULT ORGANISATIONAL STRUCTURE PROJECTS