ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮಂಗಳೂರು

ಮಂಗಳೂರು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಸರ್ಕಾರಿ ಆದೇಶ ಸಂಖ್ಯೆ.ಹೆಚ್.ಡಿ.೩.ಪಿ.ಎಫ್‌ಎಸ್.೯೩ ಬೆಂಗಳೂರು, ದಿನಾಂಕ:೧೨-೦೧-೧೯೯೪ರ ಅನ್ವಯ ೧೯೯೫ನೇ ಇಸವಿ ಜುಲೈ ತಿಂಗಳಿನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. 

ಈ ಪ್ರಯೋಗಾಲಯವು ಪ್ರಸ್ತುತ ವಿಷ ವಿಜ್ಞಾನ ವಿಭಾಗ, ಜೀವಶಾಸ್ತ್ರ ವಿಭಾಗ, ರಾಸಾಯನಿಕ ವಿಭಾಗಗಳಲ್ಲಿ  ಪ್ರಕರಣಗಳನ್ನು ಸ್ವೀಕರಿಸಿ, ವಿಶ್ಲೇಷಿಸಿ, ವರದಿಯನ್ನು ನೀಡಲಾಗುತ್ತಿದೆ. ಈ ಪ್ರಯೋಗಾಲಯವು  ಛಾಯಾಚಿತ್ರ ಮತ್ತು  ಮನೋವಿಜ್ಞಾನ ವಿಭಾಗ ಒಳಗೊಂಡಿದೆ. ಹಾಗೂ  ಹೆಚ್ಚುವರಿಯಾಗಿ ಪ್ರಶ್ನಿತ ದಸ್ತಾವೇಜು ವಿಭಾಗ ಹಾಗೂ ಅಗ್ನಿ ಅಸ್ತ್ರ ವಿಭಾಗಗಳನ್ನು ತೆರೆಯಲು ಅನುಮತಿ ದೊರೆತಿರುತ್ತದೆ.

ಈ ಪ್ರಯೋಗಾಲಯವು ತನಿಖಾಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು, ವೈದ್ಯಕೀಯ ಅಧಿಕಾರಿಗಳು, ವಿವಿಧ ವಿಭಾಗಗಳ ವಿದ್ಯಾಥಿಗಳು ಮುಂತಾದವರಿಗೆ ವಿಧಿ ವಿಜ್ಞಾನದ ಕುರಿತು ತರಬೇತಿಗಳನ್ನು ನಡೆಸುತ್ತಿದ್ದು, ಪ್ರಯೋಗಾಲಯದ ವೈಜ್ಞಾನಿಕ ಅಧಿಕಾರಿಗಳು ವಿವಿಧ ಅಪರಾಧ ನಡೆದ ಸ್ಥಳಗಳಿಗೆ ಭೇಟಿ ನೀಡಿ, ತನಿಖೆಗೆ ಕುರುಹುಗಳನ್ನು ಸಂಗ್ರಹಿಸಿಕೊಡುವುದರ ಮೂಲಕ ಪ್ರಕರಣದ ತನಿಖಾಧಿಕಾರಿಗಳಿಗೆ ನೆರವು ನೀಡುತ್ತಿದ್ದಾರೆ.

ಮಂಗಳೂರು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು NABL ಸಂಸ್ಥೆಯಿಂದ, NABL Accreditation ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದ್ದು, ಈಗಾಗಲೇ ಅಕ್ಟೋಬರ್-೨೦೨೧ರ ಮಾಹೆಯಲ್ಲಿ ಅರ್ಜಿ ಸಲ್ಲಿಸಲಾಗಿರುತ್ತದೆ.

×
ABOUT DULT ORGANISATIONAL STRUCTURE PROJECTS