ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಮೈಸೂರು

ಮೈಸೂರು ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವು ಸರ್ಕಾರಿ ಆದೇಶ ಸಂಖ್ಯೆ.ಎಚ್.ಡಿ.೮.ಪಿ.ಎಫ್‌ಎಸ್.೨೦೦೩, ದಿನಾಂಕ: ೨೬-೦೯-೨೦೦೩ ರ ಅನ್ವಯ ದಿನಾಂಕ:೨೩.೦೨.೨೦೦೬ರಿಂದ ಕಾರ‍್ಯಾರಂಭಗೊಂಡಿರುತ್ತದೆ.

ಈ ಪ್ರಯೋಗಾಲಯದಲ್ಲಿ ಜೀವಶಾಸ್ತ್ರ, ವಿಷ ವಿಜ್ಞಾನ, ರಸಾಯನ ಶಾಸ್ತ್ರ ಹಾಗೂ ಛಾಯಾಚಿತ್ರ ವಿಭಾಗಗಳು ಕಾರ್ಯ ನಿರ್ವಹಿಸುತ್ತಿದ್ದು, ರೈತರ ಆತ್ಮಹತ್ಯಾ ಪ್ರಕರಣಗಳು, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳು, ವರದಕ್ಷಿಣೆ ಸಾವು, ಪೋಕ್ಸೋ ಪ್ರಕರಣಗಳು, ಲೈಂಗಿಕ ಕಿರುಕುಳ ಪ್ರಕರಣಗಳು, ದೌರ್ಜನ್ಯ ಪ್ರಕರಣಗಳು, ಅಬಕಾರಿ ಮತ್ತು ಎನ್.ಡಿ.ಪಿ.ಎಸ್. ಪ್ರಕರಣಗಳನ್ನು ದಕ್ಷಿಣ ವಲಯಕ್ಕೆ ಸಂಬಂಧಿಸಿದ ಈ ಪ್ರಯೋಗಾಲಯದಲ್ಲಿ ಸ್ವೀಕರಿಸಿ, ವಿಶ್ಲೇಷಿಸಿ ವರದಿಗಳನ್ನು ಆದಷ್ಟು ಶೀಘ್ರವಾಗಿ  ವಿಲೇವಾರಿ ಮಾಡಲಾಗುತ್ತಿದೆ. ರೈತರ ಆತ್ಮಹತ್ಯಾ ಪ್ರಕರಣಗಳು, ಪೋಕ್ಸೋ ಪ್ರಕರಣಗಳು ಮತ್ತು ಎಸ್.ಸಿ. ಎಸ್.ಟಿ. ದೌರ್ಜನ್ಯ ಪ್ರಕರಣಗಳಲ್ಲಿ ಸರ್ಕಾರದ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ನಿಗದಿತ ಅವಧಿಯೊಳಗೆ ವಿಶ್ಲೇಷಣೆ ನಡೆಸಿ, ವರದಿಗಳನ್ನು ಕಳುಹಿಸಲಾಗುತ್ತಿದೆ.

ಈ ಪ್ರಯೋಗಾಲಯವು ವರ್ಷಪೂರ್ತಿ ದಿನದ ೨೪ ಗಂಟೆಯೂ ತನಿಖಾಧಿಕಾರಿಗಳ ಕೋರಿಕೆ ಮೇರೆಗೆ ಅಪರಾಧ ಕೃತ್ಯ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಸಹಕರಿಸುತ್ತಿದೆ.

ಈ ಘಟಕದ ಕೆ.ಪಿ.ಎ., ಮೈಸೂರಿನ ಪ್ರೊ. ಪಿ.ಎಸ್.ಐ. ಪ್ರಶಿಕ್ಷಣಾರ್ಥಿಗಳಿಗೆ ಹಾಗೂ ಮೈಸೂರು, ಮಂಡ್ಯ ಮತ್ತು ಹಾಸನ ಪೊಲೀಸ್ ತರಬೇತಿ ಶಾಲೆಗಳಲ್ಲಿ ಬುನಾದಿ ತರಬೇತಿ ಹೊಂದುತ್ತಿರುವ ಸಾವಿರಾರು ಪೊಲೀಸ್ ಸಿಬ್ಬಂದಿಗಳಿಗೆ ನ್ಯಾಯ ವಿಜ್ಞಾನ ಶಾಸ್ತ್ರ, ಅಪರಾಧ ತನಿಖೆಯಲ್ಲಿ ನ್ಯಾಯ ವಿಜ್ಞಾನದ ಪಾತ್ರ ಮತ್ತು ಅಪರಾಧ ಕೃತ್ಯ ಸ್ಥಳಗಳ ಸಂರಕ್ಷಣೆ ಈ ಕುರಿತು ಉಪನ್ಯಾಸ ನೀಡಿರುತ್ತಾರೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನ್ಯಾಯ ವಿಜ್ಞಾನ ವಿಷಯದ ಬಗ್ಗೆಯು ಸಹಾ ಉಪನ್ಯಾಸ ನೀಡುತ್ತಾರೆ.

             

×
ABOUT DULT ORGANISATIONAL STRUCTURE PROJECTS