ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಸಂಶೋಧನೆ ಮತ್ತು ಅಭಿವೃದ್ಧಿ

● ನ್ಯಾಯ ವಿಜ್ಞಾನ ಪ್ರಯೋಗಾಲಯವು ಹದಿಮೂರು ವೈವಿದ್ಯತೆಯ ವಿಭಾಗಗಳನ್ನು ಒಳಗೊಂಡ ಒಂದು ಸಂಸ್ಥೆಯಾಗಿದೆ ಇದರಲ್ಲಿ ಅನೇಕ ವಿಧವಾದ ವೈಜ್ಞಾನಿಕ ಅಂಶಗಳನ್ನು, ವೈಜ್ಞಾನಿಕ ಉಪಕರಣಗಳನ್ನು ಅಳವಡಿಸಿಕೊಂಡು ಅಪರಾಧ ಪತ್ತೆಹಚ್ಚುವಿಕೆಯ ಕಾರ್ಯವನ್ನು ನಿರ್ವಹಿಸುತ್ತಿರುತ್ತದೆ. ಇಂತಹ ಒಂದು ಸಂಸ್ಥೆಯಲ್ಲಿ ಆಯಾ ಕಾಲಮಾನಕ್ಕೆ ತಕ್ಕಂತೆ ಮತ್ತು ನೂತನ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಾಗ ನೂತನ ವೈಜ್ಞಾನಿಕತೆಯನ್ನು ಅಳವಡಿಸಕೊಳ್ಳಬೇಕಾಗಿರುತ್ತದೆ. ಈ ಒಂದು ನಿಟ್ಟಿನಲ್ಲಿ ನ್ಯಾಯ ವಿಜ್ಞಾನ ಪ್ರಯೋಗಾಲಯದ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯು ಅತ್ಯಂತ ಮುಖ್ಯವಾದ ಅಂಶವಾಗಿರುತ್ತದೆ.
● ಸಂಶೋಧನೆಯು ನ್ಯಾಯ ವಿಜ್ಞಾನ ಪ್ರಯೋಗಾಲಯದ ಎಲ್ಲಾ ವಿಭಾಗಗಳಲ್ಲಿ ಬಹಳ ಅವಶ್ಯಕವಾಗಿದ್ದು ವೈಜ್ಞಾನಿಕ ಅವಿಶ್ಕಾರಗಳನ್ನು ಅಪರಾಧ ಪ್ರಕರಣಗಳು ಹೇಗೆ ನಡೆದಿವೆ ಮತ್ತು ಅವುಗಳನ್ನು ಮೂಲ ರೂಪದಲ್ಲಿ ಹೇಗೆ ನಿರ್ವಹಿಸಿರುತ್ತಾರೆ ಎನ್ನುವ ಆಧಾರದ ಮೇಲೆ ಹಾಗು ಪುನರಾವರ್ತನೆ ಹೇಗೆ ಅಳವಡಿಸಿಕೊಂಡಿದ್ದಾರೆ ಎನ್ನುವುದನ್ನು ಕೂಲಂಕುಷವಾಗಿ ಪತ್ತೆಮಾಡಿ ಅವುಗಳಿಗೆ ನೂತನ ವೈಜ್ಞಾನಿಕ ವಿಧಿ ವಿಧಾನಗಳನ್ನು ಅಳವಡಿಸಿಕೊಂಡು ಮೂಲ ಅಪರಾಧ ಹೇಗೆ ನಡೆದಿರಬಹುದಾಗಿರುತ್ತದೆ ಎನ್ನುವುದನ್ನು ಮತ್ತು ಅವುಗಳನ್ನು ನಿರ್ವಹಿಸಿರುವ ವ್ಯಕ್ತಿಗಳು ಇವರೇ ಎಂಬುನ್ನು ನಿರ್ದರಿಸಬಹುದಾಗಿದೆ.
● ಸಂಶೋಧನ ಕಾರ್ಯಕ್ಕೆ ವೈಜ್ಞಾನಿಕ ಸಂಘಸಂಸ್ಥೆಗಳ ನೆರವು ಹಾಗು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋದನಾ ಪ್ರಕ್ರಿಯೆಯಲ್ಲಿರುವಂತಹ ವಿದ್ಯಾರ್ಥಿಗಳನ್ನು ಈ ಪ್ರಯೋಗಾಲಯದಲ್ಲಿರುವ ಸಂಶೋಧನಾ ಬೇಡಿಕೆಯಿರುವ ವಿಭಾಗಗಳ ಆಧಾರದ ಮೇಲೆ ಉಪಯೋಗಿಸಿಕೊಂಡು ಈ ಕಾರ್ಯವನ್ನು ಪರಿಪೂರ್ಣವಾಗಿ ನಿಭಾಯಿಸಬಹುದಾಗಿದೆ. ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ನೂತನ ಕ್ಷೇತ್ರಗಳಾದ ಅಡ್ವಾನ್ಸ್ ಡಿಜಿಟಲ್ ಫೋರೆನ್ಸಿಕ್, ಫೋರೆನ್ಸಿಕ್ ಅಕೌಂಟಿಂಗ್, ಫೋರೆನ್ಸಿಕ ಆಡಿಟಿಂಗ್, ಅಡ್ವಾನ್ಸ್ಡ ಡಿ.ಎನ್.ಎ ಟೆಕ್ನಾಲಜಿ, ನ್ಯೂರೋ ಫೋರೆನ್ಸಿಕ್, ನ್ಯಾನೊ ಫಿಸಿಕ್ಸ್ ಮತ್ತಿತರೆ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡಿ ಈ ವಿಭಾಗಗಳನ್ನು ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ವಿಸ್ತರಿಸಬಹುದಾಗಿದೆ. ಅಲ್ಲದೆ ಕಾಲಕಾಲಕ್ಕೆ ಪ್ರಯೋಗಾಲಯದಲ್ಲಿ ನಿರ್ವಹಿಸುತ್ತಿರುವ ವೈಜ್ಞಾನಿಕ ಸಿಬ್ಬಂದಿಗಳಿಗೆ ನೂತನ ತರಬೇತಿಗಳನ್ನು ನೀಡುವುದು ಹಾಗು ಕಾಲಕಾಲಕ್ಕೆ ತಕ್ಕಂತೆ ನೂತನ ವೈಜ್ಞಾನಿಕ ಸಿಬ್ಬಂದಿಗಳ ನೇಮಕಾತಿಯಿಂದ ಸಂಶೋಧನೆ ಮತ್ತು ಅಭಿವೃಧ್ಧಿ ವಿಭಾಗವನ್ನು ಸಮರ್ಪಕವಾಗಿ ನಿರ್ವಹಿಸಿ ಈ ಪ್ರಯೋಗಾಲಯದ ಗುಣಮಟ್ಟವನ್ನು ದೇಶದ ಇತರೆ ಪ್ರಯೋಗಾಲಯಗಳಿಗಿಂತ ಉತ್ತಮವಾದ ಗುಣಮಟ್ಟವನ್ನು ಹೆಚ್ಚಿಸಿ ಸಾರ್ವಜನಿಕ ಹಿತಾಸಕ್ತಿಯಿಂದ ಈ ಪ್ರಯೋಗಾಲಯದ ಶ್ರೇಷ್ಟತೆಯನ್ನು ಪಡೆಯಬಹುದಾಗಿದೆ.

×
ABOUT DULT ORGANISATIONAL STRUCTURE PROJECTS