ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಇತಿಹಾಸ

ಕರ್ನಾಟಕ ರಾಜ್ಯದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲೆಂದೇ ಆಗಿನ ಮೈಸೂರು ಸರ್ಕಾರದ ಆದೇಶದಂತೆ ನ್ಯಾಯ ವಿಜ್ಞಾನ ಪ್ರಯೋಗಾಲಯವು ೧ನೇ ಆಗಸ್ಟ್ ೧೯೬೭ ರಲ್ಲಿ ಅಸ್ಥಿತ್ವಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಹಳೇಯ ಸಿ.ಐ.ಡಿ. ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವ ರಾಸಯನಿಕ ಹಾಗೂ ಇಬ್ಬರು ದಸ್ತಾವೇಜು ತಜ್ಞರ ತಂಡವು ಹೊಸದಾಗಿ ಅಸ್ಥಿತ್ವಕ್ಕೆ ಬಂದಿದ್ದ ನ್ಯಾಯ ವಿಜ್ಞಾನ ಪ್ರಯೋಗಾಲಯದೊಂದಿಗೆ ವಿಲೀನಗೊಂಡಿತ್ತು. ವಿಕೇಂದ್ರಿಕರಣ ಪ್ರಗತಿಯ ಸಂಕೇತ ಈ ನಿಟ್ಟಿನಲ್ಲಿ ೧೯೯೪ ರಲ್ಲಿ ವಿವಿಧ ವಲಯಗಳಲ್ಲೂ ಸಹ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸುವ ಯೋಜನೆ ರೂಪಿಸಲಾಗಿತ್ತು ಪ್ರಪ್ರಥಮವಾಗಿ ದಾವಣಗೆರೆ ಜಿಲ್ಲೆಯಲ್ಲಿ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸಲಾಯಿತು. ಕಾಲ ಕ್ರಮೇಣ ಮಂಗಳೂರು, ಬೆಳಗಾವಿ, ಕಲಬುರ್ಗಿ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಹ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯಗಳು ಕಾರ್ಯ ನಿರ್ವಹಿಸಲು ಆರಂಭಿಸದವು. ೧೯೯೬ ರಲ್ಲಿ ಭಾರತದಲ್ಲಿಯೇ ಪ್ರಥಮವಾಗಿ ನ್ಯಾಯ ವಿಜ್ಞಾನ ಪ್ರಯೋಗಾಲಯದ ನಿರ್ದೇಶನಾಯದ ವಿಕೇಂದ್ರಿಕರಣದ ಪ್ರಗತಿಯ ಸಂಕೇತವಾಗಿ ಏಲ್ಲಾ ಆಧುನಿಕ ಉಪಕರಣಗಳನ್ನು ಒಳಗೊಂಡ ಸಂಚಾರಿ ನ್ಯಾಯ ವಿಜ್ಞಾನ ಪ್ರಯೋಗಾಲಗಳು ಅಪರಾಧ ಸ್ಥಳ ಪರಿಶೀಲನೆ ಕಾರ್ಯದಲ್ಲಿ ಬಳಸಲು ಸಜ್ಜುಗೊಂಡಿದ್ದವು. ಸದರಿ ವ್ಯಾನುಗಳ ಸೌಲಭ್ಯವನ್ನು ಸಂದರ್ಭಾನುಸಾರ ಅಗತ್ಯತಗೆ ಅನುಸಾರವಾಗಿ ಜಿಲ್ಲೆಗಳಿಗೂ ವಿಸ್ಥರಿಸಲಾಯಿತು.
    ನ್ಯಾಯ ವಿಜ್ಞಾನದಲ್ಲಿನ ಚಮತ್ಕಾರಿ ಬೆಳವಣಿಗೆಯು ಹಾಗೂ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಅದರ ಮಹತ್ವವು ಇನ್ನೂ ಹಲವಾರು ಅತ್ಯಾಧುನಿಕ ವಿಭಾಗಗಳ ಸೃಜನೆಗೆ ನಾಂದಿಯಾಯಿತು. ಪ್ರತಿ ನಿತ್ಯ ವಿಭಿನ್ನ ಪ್ರಕರಣಗಳ ಅದರಲ್ಲಿ ಎದುರಾಗುವ ಹೊಸ ಸವಾಲುಗಳು ಅವುಗಳ ಸೂಕ್ಷತೆ ಹಾಗೂ ತೀವ್ರತೆಗಳನ್ನು ಮನಗೊಂಡು ನ್ಯಾಯ ವಿಜ್ಞಾನ ಪ್ರಯೋಗಾಲಯ ನಿರ್ದೇಶನಾಲಯದ ವತಿಯಿಂದ ೨೦೦೭ ರಲ್ಲಿ ಡಿ.ಎನ್.ಎ ವಿಭಾವು ಹಾಗೂ ೨೦೧೫ ರಲ್ಲಿ ಸೈಬರ್ ಫೊರೆನ್ಸಿಕ್ ವಿಭಾಗವು ಹಾಲಿ ಕಾರ್ಯ ನಿರ್ವಹಿಸುತ್ತಿದ್ದ ವಿಭಾಗಗಳೊಂದಿಗೆ ಸೇರ್ಪಡೆಯಾದವು.

×
ABOUT DULT ORGANISATIONAL STRUCTURE PROJECTS