ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ತರಬೇತಿ

ಸ್ಥಾಯಿ ಆದೇಶ 1036 ರ ಪ್ರಕಾರ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರೀಕ್ಷಕರು ಹೊಸದಾಗಿ ನೇಮಕಾತಿಗೊಳ್ಳುವ ವೈಜ್ಞಾನಿಕ ಅಧಿಕಾರಿಗಳಿಗೆ ಎರಡು ವರ್ಷದ ತರಬೇತಿಯನ್ನು ಅನುಮೋದಿಸಿ ಆದೇಶವನ್ನು ಹೊರಡಿಸಿರುತ್ತಾರೆ. ಸದರಿ ಆದೇಶದ ಪ್ರಕಾರ ನೂತನವಾಗಿ ನೇಮಕಾತಿ ಹೊಂದುವ ವೈಜ್ಞಾನಿಕ ಅಧಿಕಾರಿಗಳು ಎರಡು ವರ್ಷಗಳ ತರಬೇತಿಯಲ್ಲಿರುತ್ತಾರೆ. ಎರಡು ವರ್ಷಗಳ ತರಬೇತಿಯ ಅವಧಿಯಲ್ಲಿ ರಾಷ್ಟ್ರೀಯ ನ್ಯಾಯ ವಿಜ್ಞಾನ ವಿಶ್ವ ವಿದ್ಯಾಲಾಯ ಗುಜರಾತಿನಲ್ಲಿ ಮೂರು ತಿಂಗಳ ಬುನಾದಿ ತರಬೇತಿಯೊಂದಿಗೆ ಪ್ರಾರಂಭವಾಗುತ್ತದೆ ನಂತರದ ದಿನಗಳಲ್ಲಿ ಕೇಂದ್ರ ನ್ಯಾಯ ವಿಜ್ಞಾನ ಪ್ರಯೋಗಾಲಯ, ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಕರ್ನಾಟಕ ಪೊಲೀಸ್ ಅಕಾಡಮಿ, ಸಿ.ಐ.ಡಿ, ಪೊಲಿಸ್ ಬೆರಳು ಮುದ್ರೆ ಘಟಕ ಗಳಲ್ಲಿ ತರಬೇತಿಯನ್ನು ಪಡೆಯುತ್ತಾರೆ. ತದ ನಂತರ ಅಧಿಕಾರಿಗಳು ವೈದ್ಯಕೀಯ ಕಾಲೇಜು, ಪ್ರಾಸಿಕುಷನ್ ಇಲಾಖೆ, ಶ್ವಾನ ದಳ, ಬಾಂಬ್ ನಿಶ್ಕ್ರೀಯದಳ ಇತ್ಯಾದಿಗಳಿಗೆ ತರಬೇತಿಯ ಭಾಗವಾಗಿ ನಿಯೋಜಿಸಲಾಗುವುದು.
ಮುಂದುವರಿದು ನ್ಯಾಯ ವಿಜ್ಞಾನ ಪ್ರಯೋಗಾಲಯದಲ್ಲಿ ಪೊಲೀಸ್, ನ್ಯಾಯ ವೈದ್ಯ ಶಾಸ್ತ್ರ, ಅರಣ್ಯ, ಮಿಲಿಟರಿ ಮತ್ತು ನ್ಯಾಯಾಂಗ ಇತರೇ ಇಲಾಖೆಯ ಅಧಿಕಾರಿಗಳಿಗೆ ನಿಯಮಿತವಾಗಿ ತರಬೇತಿಯನ್ನು ನೀಡಲಾಗುತ್ತದೆ. ಮತ್ತು ಪ್ರಯೋಗಾಲಯಕ್ಕೆ ಬೇಟಿ ನೀಡುವ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಾಯೋಗಿಕ ಪ್ರದರ್ಶನದ ಮೂಲಕ ನ್ಯಾಯ ವಿಜ್ಞಾನ ಪ್ರಯೋಗಾಲಯದ ಉಪಯುಕ್ತತೆಗಳನ್ನು ವಿವರಿಸಲಾಗುತ್ತದೆ.ಪ್ರತಿ ವರ್ಷ ಜರಗುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಸ್ಪರ್ಧಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ “ತನಿಖೆಗೆ ವೈಜ್ಞಾನಿಕ ನೆರವು” ಎಂಬ  ಶೀರ್ಷಿಕೆ ಅಡಿಯಲ್ಲಿ ದೀರ್ಘಾವಧಿ ತರಬೇತಿಯನ್ನು ನಡೆಸಲಾಗುತ್ತದೆ.

  

×
ABOUT DULT ORGANISATIONAL STRUCTURE PROJECTS