ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಹುಬ್ಬಳ್ಳಿ

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಹುಬ್ಬಳ್ಳಿಯು ಸರ್ಕಾರಿಆದೇಶ ಸಂಖ್ಯೆ:HD47POP2021(ಭಾಗ-೨), ಬೆಂಗಳೂರು, ದಿನಾಂಕ:೧೩/೧೦/೨೦೨೧ ರ ಪ್ರಕಾರ ಹುಬ್ಬಳ್ಳಿಯ ಗೋಕುಲ್‌ ರಸ್ತೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಟ್ಟಡದಲ್ಲಿ ಸ್ಥಾಪಿಸಲಾಗಿದೆ. ಆರ್‌ಎಫ್‌ಎಸ್‌ಎಲ್ ಹುಬ್ಬಳ್ಳಿಯು ನಿರ್ದೇಶನಾಲಯ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಬೆಂಗಳೂರು, ಕರ್ನಾಟಕ ಇವರ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಘಟಕವು ಡಿಎನ್‌ಎ ವಿಭಾಗ, ಭೌತಶಾಸ್ತ್ರ ವಿಭಾಗ, ಮೊಬೈಲ್ ಫೋರೆನ್ಸಿಕ್ ವಿಭಾಗ, ಕಂಪ್ಯೂಟರ ಫೊರೆನ್ಸಿಕ್ ವಿಭಾಗ ಮತ್ತುಆಡಿಯೋ-ವಿಡಿಯೋ ಫೊರೆನ್ಸಿಕ್ ವಿಭಾಗಗಳನ್ನು ಹೊಂದಿದೆ. ಎಲ್ಲಾ ವಿಭಾಗಗಳು ಕಾನೂನು ಜಾರಿ ಏಜೆನ್ಸಿಗಳ ಅಗತ್ಯತೆಗಳನ್ನು ಸಮಯೋಚಿತವಾಗಿ ಪೂರೈಸಲು ಮತ್ತುಅಪರಾಧಿಕ ನ್ಯಾಯ ವಿತರಣ ವ್ಯವಸ್ಥೆಗೆ ಸಹಾಯ ಮಾಡಲು ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.

ಡಿಎನ್‌ಎ ವಿಶ್ಲೇಷಣೆಯು ಲೈಂಗಿಕ ಅಪರಾಧಗಳು, ಮಾನವ ಗುರುತಿಸುವಿಕೆ, ಪಿತೃತ್ವ/ಮಾತೃತ್ವ ವಿವಾದಗಳ ಮತ್ತು ಮಕ್ಕಳ ವಿನಿಮಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಪರಿಹರಿಸುವುದನ್ನು ಒಳಗೊಂಡಿರುತ್ತದೆ. ಡಿಜಿಟಲ್ ಫೋರೆನ್ಸಿಕ್ ಲೈಂಗಿಕ ಅಪರಾಧಗಳು, ಚಿತ್ರಗಳ ಮಾರ್ಫಿಂಗ್, ಆಡಿಯೋ-ವಿಡಿಯೋದೃಢೀಕರಣ ಮತ್ತು ಐಟಿ ಕಾಯ್ದೆ ೨೦೦೦ ಗೆ ಸಂಬoಧಿಸಿದ ಪ್ರಕರಣಗಳನ್ನು ಪರಿಹರಿಸುವಲ್ಲಿಕೇಂದ್ರೀಕರಿಸುತ್ತದೆ.ಭೌತಶಾಸ್ತ್ರ ವಿಭಾಗವು ರಸ್ತೆ ಅಪಘಾತಗಳು, ಹಿಟ್ ಮತ್ತುರನ್ ಪ್ರಕರಣಗಳು, ವಾಹನಗಳಲ್ಲಿ ಟ್ಯಾಂಪರಿಂಗ್, ವಿವಿಧ ವಸ್ತುಗಳ ನೈಜತೆ ಮತ್ತು ಭೌತಿಕ ಹೊಂದಾಣಿಕೆ, ಗುರುತು ಮತ್ತು ಹೋಲಿಕೆ, ದೃಢೀಕರಣದ ಪ್ರಕರಣಗಳನ್ನು ಕೈಗೊಳ್ಳುತ್ತದೆ.

×
ABOUT DULT ORGANISATIONAL STRUCTURE PROJECTS