ನ್ಯಾಯ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯ, ಕರ್ನಾಟಕ

ಕರ್ನಾಟಕ ರಾಜ್ಯ ಪೊಲೀಸ್

Back
ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬಳ್ಳಾರಿ

 

ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಬಳ್ಳಾರಿಯು ಸರ್ಕಾರಿ ಆದೇಶ ಸಂಖ್ಯೆ: HD 47 POP 2021 ( ಭಾಗ -2), ಬೆಂಗಳೂರು, ದಿನಾಂಕ: 13.10.2021 ರ ಪ್ರಕಾರ ಸ್ಥಾಪಿಸಲಾಗಿದೆ. ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ ಬಳ್ಳಾರಿಯು ನಿರ್ದೇಶನಾಲಯ ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ ಬೆಂಗಳೂರು, ಕರ್ನಾಟಕ ಇವರ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಘಟಕವು ವಿಷ ವಿಜ್ಞಾನ ವಿಭಾಗ ಮತ್ತು ಜೀವ ಶಾಸ್ತ್ರ ವಿಭಾಗಗಳನ್ನು ಹೊಂದಿದೆ, ಎರಡು ವಿಭಾಗಗಳು ಕಾನೂನು ಜಾರಿ ಏಜೆನ್ಸಿಗಳ ಅಗತ್ಯತೆಗಳನ್ನು ಸಮಯೋಚಿತವಾಗಿ ಪೂರೈಸಲು ಮತ್ತು ಅಪರಾಧಿಕ ನ್ಯಾಯ ವಿತರಣ ವ್ಯವಸ್ಥೆಗೆ ಸಹಾಯ ಮಾಡಲು ಅಗತ್ಯವಾದ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿವೆ.
ವಿಷ ವಿಜ್ಞಾನ ವಿಭಾಗದಲ್ಲಿ ಐ.ಪಿ.ಸಿ ಕಾಯ್ದೆ ಮತ್ತು ಯು.ಡಿ.ಆರ್ ಪ್ರಕರಣಗಳಿಗೆ ಸಂಬಂಧಪಟ್ಟ ಪ್ರಕರಣಗಳ ವಿಶ್ಲೇಷಣೆಯು ನರಹತ್ಯೆ, ಅತ್ಮಹತ್ಯೆ, ಮರ್ಡರ್, ವರದಕ್ಷಿಣೆ ಕಿರುಕುಳ, ನೇಣು ಹಾಕಿಕೊಂಡಿರುವ ಉಸಿರುಗಟ್ಟಿಸಿ ಕೊಂದ ಪ್ರಕರಣಗಳಲ್ಲಿ ವಿಷ ಪತ್ತೆ ಹಚ್ಚುವಿಕೆ, ಆಲ್ಕೋಹಾಲ್ ಪತ್ತೆ ಹಚ್ಚುವಿಕೆ, ಮಾದಕಗಳ ಪತ್ತೆ ಹಚ್ಚುವಿಕೆ ಹಾಗೂ ಇತರೆ ರಾಸಾಯನಿಕಗಳ ಪತ್ತೆ ಹಚ್ಚುವಿಕೆಯನ್ನು ಒಳಗೊಂಡಿರುತ್ತದೆ ಮತ್ತು ಜೀವ ಶಾಸ್ತ್ರ ವಿಶ್ಲೇಷಣೆಯು ಲೈಂಗಿಕ ಅಪರಾಧಗಳ, ಕೊಲೆ ಪ್ರಕರಣಗಳು, ಪೋಕ್ಸೊ ಪ್ರಕರಣಗಳು ಮತ್ತು ಗೋಹತ್ಯೆ ಪ್ರಕರಣಗಳನ್ನು ಒಳಗೊಂಡಿರುತ್ತದೆ.

 

 

×
ABOUT DULT ORGANISATIONAL STRUCTURE PROJECTS